ಕನ್ನಡ ಚಟುವಟಿಕೆ –
“ದಯೆ ಇರಲಿ ಸಕಲ ಪ್ರಾಣಿಗಳಲ್ಲಿ” ಎಂಬ ಮಾತಿನಂತೆ ಎಲ್ಲ ಜೀವಿಗಳಿಗೂ ಬದುಕಲು ಸಮಾನ ಹಕ್ಕಿದೆ ಆದರೆ ಮನುಷ್ಯ ತನ್ನ ಸ್ವಾರ್ಥ ನಿಮಿತ್ತವಾಗಿ ಅದಕ್ಕೆ ಅವಕಾಶ ನೀಡುತ್ತಿಲ್ಲ.ಕೆಲವೊಮ್ಮೆ ಆತ ತನ್ನ ಶಾಂತಿ ನೆಮ್ಮದಿಗಳಿಗೆ ತಾನೇ ಅಡ್ಡಿಯಾಗುತ್ತಾನೆ.ಮನುಷ್ಯ ಮಾಡುತ್ತಿರುವದ್ದನ್ನು ಖಂಡಿಸಿ.ಪ್ರಾಣಿಗಳೆಲ್ಲ ಮನುಷ್ಯನಿಗೆ ತಿಳಿಹೇಳಲು ಫಲಕದಲ್ಲಿ ಘೊಷಣೆಗಳನ್ನು ಬರೆದು ತಿಳಿಹೇಳಲು ಪ್ರಯತ್ನಿಸುವ ಒಂದು ಬಗೆಯ ಪಾತ್ರವನ್ನು ಮಕ್ಕಳ ಮೂಲಕ ಮಾಡಿಸಲಾಯಿತು. ಅದುವೇ ಮಕ್ಕಳೆಲ್ಲ ಪ್ರಾಣಿಗಳ ಮುಖವಾಡ ಧರಿಸಿ ಫಲಕ ಹಿಡಿದು ಘೋಷಣೆಗಳನ್ನು ಹೇಳಿದರು. ಈ ಚಟುವಟಿಕೆಯನ್ನು ಮಕ್ಕಳೆಲ್ಲಾ ತುಂಬಾ ಚೆನ್ನಾಗಿ ಪ್ರಸ್ತುತ ಪಡಿಸಿದ್ದಾರೆ.
“ಕಾಡು ಬೆಳೆಸಿ ಪ್ರಾಣಿ ಉಳಿಸಿ”