‘ಹುತ್ತರಿ ಹಾಡು ಎಂಬ’ಪದ್ಯದಲ್ಲಿಯ ಮುಖ್ಯ ಪದ ಹುತ್ತರಿ ಎಂಬುವುದು ಕೊಡಗಿನಲ್ಲಿ ಜನರು ಸಾಂಪ್ರದಾಯಿಕವಾಗಿ ಆಚರಿಸುವ ಸುಗ್ಗಿ ಹಬ್ಬದ ಅರ್ಥವನ್ನು ಬಿಂಬಿಸುತ್ತದೆ. ಈ ಹಬ್ಬದಲ್ಲಿ ಕೊಡಗಿನ ಜನರೆಲ್ಲರೂ ಕೂಡಿ ಕೊಡಗಿನ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಧರಿಸಿ ಪೂಜೆ ಸಲ್ಲಿಸಿ,ನೃತ್ಯ ಮಾಡುತ್ತ ಹಬ್ಬ ಆಚರಿಸುತ್ತಾರೆ.ಈ ರೀತಿಯ ಕೊಡಗಿನಲ್ಲಿ ಅಲ್ಲಿಯ ಜನರು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿಕೊಳ್ಳುವ ಚಟುವಟಿಕೆಯನ್ನು ನಮ್ಮ ಶಾಲೆಯ 5 ನೇ ತರಗತಿ ವಿದ್ಯಾರ್ಥಿನಿಯರಿಗೆ ನೀಡಲಾಗಿತ್ತು. ಮಕ್ಕಳೆಲ್ಲಾ ಚಟುವಟಿಕೆಯಲ್ಲಿ ಅತೀ ಸಂತಸದಿಂದ ಭಾಗವಹಿಸಿದರು ಮತ್ತು ಕೊಡಗಿನಲ್ಲಿ ಆಚರಿಸುವ ಹುತ್ತರಿ ಹಬ್ಬದ ಸಾಂಪ್ರದಾಯಿಕ ಉಡುಗೆ ಬಗ್ಗೆ ಮತ್ತು ಹಬ್ಬದ ವಿಶೇಷತೆಯನ್ನು ತಿಳಿದುಕೊಂಡರು ಹಾಗೂ ಈ ಚಟುವಟಿಕೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.